Friday, June 5, 2009

ದೀಪಾವಳಿ

ಈಗ ತಾನೆ ಬರಹ ಡೊವ್ನ್ ಲೊಡ್ ಮಾಡಿದೆ.
ಕನ್ನಡದಲ್ಲಿ ಕನ್ನಡದ ಕವಿತೆಗಳನ್ನ ಬರೆಯೋದೆ ಒನ್ದು ಸೊಗಸು.
"ದೀಪಾವಳಿ" ಎಮ್ಬ ಶೀರ್ಶಿಕೆಯಲ್ಲಿ ಬರೆದನ್ತ ಈ ಕವನ ನಾನು ಸ್ಖೂಲ್ನಲ್ಲಿದ್ದಾಗ ಬರೆದದ್ದು.
"ಇದ್ದರೆ ನವರಾತ್ರಿ ಇಲ್ಲದಿದ್ರೆ ಶಿವರಾತ್ರಿ" ಎನ್ನೊ ರೀತಿ ಇತ್ತು ಅನ್ದಿನ ನಮ್ಮ ಜೀವನ.
ಯಾವ ಸಮ್ಬನ್ಧಿಕರು ಇಲ್ಲ.. ಸ್ನೇಹಿತರು ಇಲ್ಲದ ದುರ್ಭಿಕ್ಶ್ಯ ಕಾಲ ಅದು.
ಒಬ್ಬರಿಗೆ ಸಹಾಯ ಮಡೋದು ದೂರ, ಅನ್ಥದ್ದರಲ್ಲಿ ಎಲ್ಲರ ಕಾಲು ಎಳೆಯೊದೆ ಜನಗಳ ಹವ್ಯಾಸ ಆಗಿಹೊಗಿತ್ತು.
ಹೀಗಿರುವಾಗ ಬನ್ತು ದೀಪವಳಿ ಹಬ್ಬ. ಏಲ್ಲರ ಮನೆಲು ಪಟಾಕಿಗಳ ಶಬ್ಧ ಆದರೆ ನಮ್ಮ ಮನೆಯಲ್ಲಿ ದೀಪ ಹಚ್ಚೊಕ್ಕು ಪರದಾಟ. ಈ ಪರಿಸ್ಥಿತಿ ನೋಡಿ ನನ್ನ ಮನಸ್ಸಿನಲ್ಲಿ ಮೂಡಿದ ನಾಲ್ಕು ಸಾಲುಗಳು ಇವು.
ಇದು ಬರೀ ನನ್ನ ಕಥೆ ಮಾತ್ರ ಆಗಿರಲಿಲ್ಲ, ಇನ್ದಿಗೂ ಬಹುತೇಕ ಜನರ ಪರಿಸ್ಥಿಯು ಹೌದು. ಪ್ರತಿಯೊಬ್ಬರು ಅವರುಗಳ ಮನಸ್ಸಿನಲ್ಲಿ ಕವಿದಿರುವ ಕತ್ತಲೆ ಎನ್ದಿಗೆ ಕಳೆದು ಬೆಳಕು ಹರಿಯುದು ಅನ್ತ ಕಾಯ್ತನೆ ಇದ್ದಾರೆ.
ಮನಸ್ಸಿನ ಆ ಕತ್ತಲು ಹಸಿವಿಗಿರಬಹುದು, ಒನ್ಟಿತನಕ್ಕಿರಬಹುದು , ಜೀವನದಲ್ಲಿ ಎನನ್ನೊ ಕಳೆದುಕೊನ್ಡಿದ್ದಕ್ಕಿರಬಹುದು. ಯವುದಕ್ಕಾದರು ಸರಿಯೆ, ಎಲ್ಲರು ಎದಿರುನೊಡುವುದು ಮನಸ್ಸಿನ ದೀಪಾವಳಿಗಾಗಿ.
ಕತ್ತಲಿನಿನ್ದ ಬೆಳಕಿನ ಕಡೆಗಿನ ಪಯಣಕ್ಕಾಗಿ.

******************************
ಕತ್ತಲು ಕವಿದ ಮನಕೆ ಬರುವುದೆನ್ತು ದೀಪಾವಳಿ
ಏಲ್ಲೆಲ್ಲು ಕುಹಕಿಗಳ ಹಾವಳಿ
ತನ್ದಿಹರು ಕನ್ನೀರ ಈ ಬಳುವಳಿ
ನಗುವುದೆನ್ತೋ ಈ ನನ್ನ ಮನವರಳಿ
******************************

No comments: