Sunday, June 7, 2009

ನಿ(ನ)ನ್ನತನ

ಈ ಪ್ರಪನ್ಚಕ್ಕೆ ನಾವು ಬರುವಾಗ ಒನ್ಟಿಯಾಗಿ ಬರ್ತೀವಿ. ಹೊಗುವಾಗಲು ಅಶ್ಟೆ. ಮನುಶ್ಯ ಸನ್ಘ ಜೀವಿ ಅನ್ನೊದು ಅವನು ಬದುಕಿದ್ದಶ್ಟು ಕಾಲ ಮಾತ್ರ.
ಈ ಬದುಕಿದ್ದಶ್ಟು ಕಾಲದಲ್ಲಿ ತಾನು ಎನು ಮಾಡಬೇಕು, ಏನನ್ನು ಸಾಧಿಸಬೇಕು ಎಮ್ಬುದನ್ನು ಅರಿತವರು ನಮ್ಮ ನಡುವೆ ತುಮ್ಬ ವಿರಳ. ಎಲ್ಲರೂ ಬೇರೊಬ್ಬರನ್ನು ಮೆಚ್ಚಿಸಿ ಸೈ ಎನಿಸಿಕೊನ್ಡರೆ ಸ್ವರ್ಗವೇ ಸಿಕ್ಕಷ್ಟು ಸನ್ತೊಷ ಪಡುತ್ತಾರೆ. ಎಶ್ಟೊ ಜನಗಳ ಜೀವನ ಧ್ಯೇಯ ಅದೇ ಆಗಿದೆ ಇನ್ದು. ಜನ ಮೆಚ್ಚಿಗೆಗೋಸ್ಕರ ತಮ್ಮ ತನವನ್ನು
ಮರೆತು ಬೇರೆಯವರ ವಿಚಾರಗಳು, ವ್ಯವಸ್ಥೆಗಳನ್ನ ತಮ್ಮದಾಗಿಸಿಕೊಳ್ಳೋಕ್ಕೆ ಮುನ್ನುಗ್ಗುತ್ತಾರೆ. ಮನಸ್ಸು ಹಾರಲು ಬಯಸಿದರೂ, ಜನಗಳಿಗೆ ಹೆದರಿ ಮನಸ್ಸಿನ ಆಸೆ ಕನಸುಗಳಿಗೆ ಸರಪಳಿ ಬಿಗಿದು ಯವುದೋ ಒನ್ದು ಮೂಲೆಯಲ್ಲಿ ಬಿಸುಟುತ್ತಾರೆ. ತಮಗೆ ತಾವೇ ಅನ್ಯಾಯವೆಸಗುತ್ತಾರೆ. ಸಮಾನ್ಯವಾಗಿ ಎಲ್ಲ ಜನರಲ್ಲೂ ಕನ್ಡು ಬರುವ ಈ ಪ್ರವ್ರುತ್ತಿ ಬಹುಶಃ ಭಾರತೀಯರಲ್ಲಿ ಜಾಸ್ತಿ ಇದೆಯೋ ಏನೋ ಎಮ್ಬುದು ನನ್ನ ಅನಿಸಿಕೆ. ಹಾಗಿರುವ ಕಾರಣದಿನ್ದಲೇ ಇನ್ದು ನಮ್ಮ ಭಾರತೀಯ ಸಮ್ಸ್ಕ್ರುತಿ ಅವಸಾನದತ್ತ ಸಾಗಿದೆ. ಜೀವನದ ಮುಸ್ಸನ್ಜೆಯಲಿ ನಮ್ಮನ್ನು ನಾವೆ, "ನಮ್ಮತನ ಮರೆತು ಬೆರೆಯವರನ್ನ ಮೆಚ್ಚಿಸಲು ಮಾಡಿದ ನಮ್ಮ ಪ್ರಯತ್ನದಿದ್ನ ಆದ ಲಾಭ ಏನು????" ಎನ್ದು ಪ್ರೆಶ್ನಿಸಿದಾಗ ನಮಗೆ ಸಿಗುವ ಉತ್ತರವಾದರೂ ಏನು??? ಇದರಿನ್ದ ನಾವು ಸಾಧಿಸಿದ್ದಾದರೂ ಏನು ?????

ಹೀಗೆ ಒನ್ದು ದಿನ ವಿಚಾರ ಮಾಡುತ್ತ ನಾನು ಕುಳಿತಿದ್ದಾಗ ನನ್ನ ಮನಸ್ಸಿಗೆ ಬನ್ದದ್ದು ಈ ಕೆಳಗಿನ ನಾಲ್ಕು ಸಾಲುಗಳು:

ನೀನು, ಇವಳು, ಅವನು, ಅವಳು ....
ಎಲ್ಲರೊಳಗೆ ತನ್ನ ಮರೆತು ....
ನಿಜದ ಮೊಗವ ಮರೆಸಿ ನೀನು ......
ಹೊರಟೆ ಸಾಧಿಸಲು ಎನು???????????????

ಭ್ರಮೆಯು ಕಳಚಿ
ಸತ್ಯ ಇಣುಕಿ....
ನಿನ್ನ ತನವ ಕೆಣಕಿದಾಗ....
ತಿರುಗಿ ಏನ ಹೆಳುವೆ ???? ನಿನ್ನನೆಲ್ಲಿ ಹುಡುಕುವೆ ???????????

No comments: